ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ ರಕ್ತದಾನ ಶಿಬಿರ

0
449

ರಿಪ್ಪನ್‌ಪೇಟೆ: ರಕ್ತಕ್ಕೆ ಯಾವುದೇ ಜಾತಿ ಭೇದವಿಲ್ಲ. ಸಾವನ್ನಪ್ಪುವ ಜೀವಕ್ಕೆ ಇನ್ನೊಬ್ಬರ ರಕ್ತವನ್ನು ನೀಡಿ ಜೀವ ಉಳಿಸುವುದು ಪುಣ್ಯದ ಕೆಲಸ ಎಂದು ಜಂಬಳ್ಳಿ ಗಜಾನನ ಯುಕಸಂಘದ ಅಧ್ಯಕ್ಷ ಜೆ.ಎಂ. ಶಾಂತಕುಮಾರ್ ಹೇಳಿದರು.

ಜಂಬಳ್ಳಿ ಗ್ರಾಮದಲ್ಲಿ ಜನಸ್ಪಂದನ ಟ್ರಸ್ಟ್ ಹಾಗೂ ಶಿವಮೊಗ್ಗ ಸಂಜೀವಿನಿ ರೆಡ್‌ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಸರಳತೆ ಸಾಮ್ರಾಟ್ ಪುನೀತ್‌ ರಾಜ್‍ಕುಮಾರ್ ಸ್ಮರಣಾರ್ಥ ಆಯೋಜಿಸಲಾದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿ, ಪುನೀತ್ ರಾಜ್‌ಕುಮಾರ್ ಅಕಾಲಿಕ ಮರಣದಿಂದ ಚಿತ್ರರಂಗಕ್ಕೆ, ಸಮಾಜಕ್ಕೆ ತುಂಬಲಾದ ನಷ್ಟವಾಗಿದೆ‌. ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿದರೂ ಎಲೆಮರೆಯ ಕಾಯಿಯಂತೆ ದಾನಕೊಟ್ಟರು ಗೊತ್ತಾಗಬಾರದು ಎಂಬುದು ಪುನೀತ್ ರಾಜ್‌ರಿಂದ ಕಲಿಯಬೇಕಾಗಿದೆ ಎಂದು ಯುವ ಸಮೂಹಕ್ಕೆ ವಿವರಿಸಿದರು.

ಶಿವಮೊಗ್ಗ ಸಂಜೀವಿನಿ ರೆಡ್‌ಕ್ರಾಸ್ ಸಂಸ್ಥೆ ದಿನಕರ್ ಹಾಗೂ ಸ್ಪಂದನ ಟ್ರಸ್ಟ್‌ನ ಮತ್ತು ಜಂಬಳ್ಳಿ ಗಜಾನನ ಯುವಕ ಸಂಘ ಮತ್ತು ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು.

ಜಯಪ್ರಕಾಶ್ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here